ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಉಸ್ತುವಾರಿ ಒಂದು ಬಾರಿ, ವೀರವರ್ಮ ಎನ್ನುವ ದುಷ್ಟ ರಾಜನ ಕೈಗೆ ಸೇರಿತ್ತು. ಆ ದುಷ್ಟ ರಾಜನಿಗೆ ದೇವಿಯ ವಿಗ್ರಹದ ಕೆಳಗಿದ್ದ ನಿಧಿಯ ಬಗ್ಗೆ ತಿಳಿದು, ಆ ನಿಧಿಯನ್ನ ಲಪಟಾಯಿಸಿ, ದೇವಿಯ ವಿಗ್ರಹದ ದಿಕ್ಕನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿದ. ಪದ್ದಾನೆ- ತುಳು ಜನಪದ ಹಾಡಿನ ಪ್ರಕಾರ, ಕಾಂತಬಾರೆ ಹಾಗು ಬುಡಬಾರೆ ಎನ್ನುವ ತುಳುನಾದ ನಾಯಕರು ವೀರವರ್ಮನನ್ನು ಕೊಂದು, ಮುಂದ್ಕೂರಿಗೆ ಶಾಂತಿಯನ್ನು ತಂದು ಕೊಟ್ಟು, ಆ ದೇವಸ್ಥಾನದ ಜವಾಬ್ದಾರಿಯನ್ನು ಮೂಡಬಿದ್ರಿಯ ಚೌಟರಿಗೆ ಒಪ್ಪಿಸಿದರು. ದೇವಸ್ಥಾನವನ್ನು ಚೌಟರು ಅಭಿವೃದ್ದಿಗೊಳಿಸಿದ್ದರು.

ದಂತಕಥೆಯ ಪ್ರಕಾರ, ಮೂಡಬಿದ್ರಿಯ ರಾಜ ರಾಣಿ ದೇವಿಯ ಮುಂದೆ ಪ್ರಾರ್ಥನೆ ಮಾಡುತ್ತಾ ನಿಂತಿದ್ದಾಗ, ರಾಣಿಯ ಕಿವಿ ಓಲೆಯು ಕಳಚಿ ಕೆಳಗೆ ಬೀಳುತ್ತದೆ. ಆ ಓಲೆಯನ್ನು ರಾಣಿಯು ದೇವಿಗೆ ಅರ್ಪಿಸಿಬಿಡುತ್ತಾರೆ. ಆ ಓಲೆಯನ್ನು ಇಂದಿಗೂ ದೇವಿಗೆ ಹಾಕಿ ಅಲಂಕರಿಸಲಾಗುತ್ತದೆ. ಎರಡು ಮರದ ಕಂಬಗಳ ಮೇಲೆ ಈ ಕಥೆಯನ್ನು ನೆನಪಿಗೆ, ಕೆತ್ತನೆ ಮಾಡಲಾಗಿದೆ.

ಬ್ರಹ್ಮರಥೋತ್ಸವ <ಕುಂಭ ಮಾಸ, ಫ಼ೆಬ್ರವರಿ>

ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮರಥೋತ್ಸವದಂದು, ದೇವಿಯನ್ನು ಅಲಂಕರಿಸಿದ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಮಾರನೆಯ ದಿನ, ’ಜಳಕ’ ಎನ್ನುವ ಶಾಸ್ತ್ರ ನಡೆಯುತ್ತದೆ. ಆ ಶಾಸ್ತ್ರದಲ್ಲಿ, ದೇವಿಯನ್ನು ಅಲಂಕರಿಸಿದ ಪಲ್ಲಕ್ಕಿಯ ಮೇಲೆ ಕೂರಿಸಿ ಶಾಂಭವಿ ನದಿಯ ಬಳಿ ಕರೆದೋಯ್ದು, ದೇವಿಯ ಮೂರ್ತಿಯನ್ನು ಒಂದು ಬಾರಿ ಮುಳುಗಿಸಿ, ತೆಗೆದು, ದೇವಸ್ಥಾನಕ್ಕೆ ಮರಳಿ ಕರೆತರುಲಾಗುತ್ತದೆ

ನಗರ ಸಂಕೀರ್ತನ <ಕಾರ್ತೀಕ ಮಾಸ, ನವೆಂಬರ್>

ಈ ಕಾರ್ಯಕ್ರಮ ಕಾರ್ತೀಕ ಮಾಸದ ಉದ್ದಕ್ಕೂ ನಡೆಯುತ್ತದೆ. ಇಡೀ ದಿನ ದೇವರ ಭಜನೆಗಳನ್ನು ಮಾಡಿ, ಭಕ್ತರಿಗೆ ಪ್ರಸಾದವನ್ನು ಹಂಚಲಾಗುತ್ತದೆ.

ದೀಪೋತ್ಸವ <ಕೃಷ್ಣ ತ್ರಯೋದಶಿ ಮತ್ತು ಚತುರ್ದಶಿ, ನವೆಂಬರ್>

ಭಕ್ತರು ದೇವಸ್ಥಾನದ ಒಳಗೂ ಹಾಗು ಹೊರಗೂ ಎಣ್ಣೆ ದೀಪವನ್ನು ಹಚ್ಚುತ್ತಾರೆ. ಸಂಜೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ

ಲಕ್ಷದೀಪೋತ್ಸವ <ಕಾರ್ತೀಕ ಮಾಸ, ನವೆಂಬರ್>

ಒಂದು ಲಕ್ಷ ಎಣ್ಣೆ ದೀಪವನ್ನು ದೇವಸ್ಥಾನದ ಒಳಗೆ ಹಾಗೆ ಹೊರಗೆ ಹಚ್ಚಲಾಗುತ್ತದೆ. ಸಂಜೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ

ನವರಾತ್ರಿ <ಶರನ್ನವರಾತ್ರಿ, ಅಕ್ಟೋಬರ್>

ಒಂಬತ್ತು ದಿನದ ನವರಾತ್ರಿಯಂದು ದೇವಿಯನ್ನು ಒಂಬತ್ತು ಬೇರೆ ಬೇರೆ ರೀತಿಯ ದುರ್ಗಿಯ ಅವತಾರದಲ್ಲಿ ಅಲಂಕರಿಸಲಾಗುತ್ತದೆ. ಇದು ಇಲ್ಲಿ ಮಾತ್ರ ನಡೆಯುವ ವಿಶೇಷವಾದ ಅಲಂಕಾರ.

 

 

To read about other South Indian temples please click  https://goo.gl/yCxoer

 

Categories: General

Related Posts

General

Phulera Dooj, 28 February 

  Phulera Dooj is a wonderful celebration of the colourful season we are in – spring time. Phulera means ‘’of flowers’’. Falling between Vasant Panchami and Holi, this festival is mostly celebrated in the North Read more…

General

फुलेरा दूज – 28 फ़रवरी – मंगलवार

  वसंत ऋतु के उल्लासपूर्ण वातावरण का एक आनंदमयी उत्सव है ‘फुलेरा दूज’। यह त्यौहार वसंत पंचमी और होली के बीच फाल्गुन मास के शुक्ल पक्ष की द्वितीया तिथि को मनाया जाता है। इसे फाल्गुन Read more…

General

శ్రీ కన్యకాపరమేశ్వరి ఆలయం, బెల్లంపల్లి

  శ్రీ వాసవీ కన్యకా పరమేశ్వరి వైశ్యుల కులదేవత.  వాసవీ పురాణంలో వైశ్యులలో కళింగ వైశ్యులు, త్రివర్ణిక వైశ్యులనే రెండు వర్గాలు ఉన్నట్లు పేర్కొనబడినది. ఈ దేవతకు ప్రధాన క్షేత్రం పశ్చిమ గోదావరి జిల్లా పెనుగొండ. వాసవీ కన్యకా పరమేశ్వరి ఆత్మార్పణ చేసుకొనే సమయంలో భక్తుల కోరిక మేరకు Read more…